ಶ್ರೀ ವೀರೇಶ್ವರ ಪುಣ್ಯಾಶ್ರಮ ಗದಗ - ದಾವಣಗೆರೆ - ಶಿವಮೊಗ್ಗ

ಸ್ಥಾಪನೆ : 16.06.1915

ಶ್ರೀ ಕಲ್ಲಜ್ಜಯ್ಯನವರು

ಆಶ್ರಮದ ಈಗಿನ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಕಲ್ಲಯ್ಯಜ್ಜನವರು ( ಕಲ್ಲಯ್ಯಸ್ವಾಮಿ ವೀರಯ್ಯಸ್ವಾಮಿ ಸಂಗನಾಳ ಹಿರೇಮಠ ) ಇವರು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ದಿ. 18-05-1973 ರಂದು ಶ್ರೀ ವೀರಯ್ಯಸ್ವಾಮಿ ಸಂಗನಾಳ ಹಿರೇಮಠ ಹಾಗು ಶ್ರೀಮತಿ ಬಸಮ್ಮ ಇವರ ನಾಲ್ಕನೇ ಪುತ್ರರಾಗಿ ಜನಿಸಿರುತ್ತಾರೆ. ಹುಟ್ಟಿದಾಗ ಇವರ ಕಣ್ಣುಗಳು ಸರಿಯಾಗಿ ಇದ್ದಾಗ 4ನೇ ತರಗತಿಯವರೆಗೆ ಅಭ್ಯಾಸ ಮಾಡಿರುತ್ತಾರೆ. ನಂತರ ಇವರ ದೃಷ್ಟಿ ಮಂದವಾಗುತ್ತಾ ಯಾವ ಚಿಕೆತ್ಸೆಯೂ ಫಲಕಾರಿಯಾಗದೆ ತಮ್ಮ ದೃಷ್ಡಿಯನ್ನು ಕಳೆದುಕೊಂಡಿರುತ್ತಾರೆ. ನಂತರ, ಬರಹಗಾರರ ಸಹಾಯದಿಂದ ತಮ್ಮ ವಿದ್ಯಾಭ್ಯಾಸ ಮುಂದುವರೆಸಿ, ಗದುಗಿನ ವೀರೇಶ್ವರ ಪುಣ್ಯಾಶ್ರಮ ಸೇರಿ  10ನೇ ತರಗತಿ ಉತ್ತೀರ್ಣರಾಗಿರುತ್ತಾರೆ, ನಂತರ,ತಮ್ಮ ಸಂಗೀತದ ಅಭ್ಯಾಸವನ್ನು ಮುಂದುವರೆಸುತ್ತಾ ಪಿ.ಯು.ಸಿ ಹಾಗು ಬಿ.ಎ. ಮ್ಯೂಸಿಕ್ ಪದವಿ ಗಳಿಸಿದ್ದಾರೆ. ಅಲ್ಲದೇ, ಇವರು ತಬಲಾ ಹಾಗು ಶಾಸ್ತ್ರೀಯ ಸಂಗೀತದಲ್ಲಿ ವಿದ್ವತ್ ಪೂರ್ಣಗೊಳಿಸಿದ್ದಾರೆ. ನಂತರದಲ್ಲಿ, ಗುರುಗಳಾದ ಪರಮಪೂಜ್ಯ ಪಂ.ಪುಟ್ಟರಾಜ ಗವಾಯಿಗಳ ನಿರ್ದೇಶನದಂತೆ, ಗಂಗಾವತಿಯ ಕೊಟ್ಟೂರೇಶ್ವರ ಸಂಗೀತ ಪಾಠಶಾಲೆಯಲ್ಲಿ ತಬಲಾ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುತ್ತಾರೆ.

ದಿನಾಂಕ: 21-09-2001 ರಂದು ಪರಮಪೂಜ್ಯ ಪಂ.ಪುಟ್ಟರಾಜ ಗವಾಯಿಗಳ ಇಚ್ಛಾನುಸಾರ ಆಶ್ರಮದ ಉತ್ತರಾಧಿಕಾರಿಯಾಗಿ ಶ್ರೀ ವೀರೇಶ್ವರ ಪುಣ್ಯಾಶ್ರಮವನ್ನು ಸೇರಿದರು. ಶ್ರೀ ಪಂ.ಪುಟ್ಟರಾಜ ಗವಾಯಿಗಳ ಲಿಂಗೈಕ್ಯರಾದ ನಂತರ 21-10-2010 ರಿಂದ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೀಠಾಧ್ಯಕ್ಷರಾಗಿ ಆಶ್ರಮದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ.

News & Events