ಶ್ರೀ ವೀರೇಶ್ವರ ಪುಣ್ಯಾಶ್ರಮ ಗದಗ - ದಾವಣಗೆರೆ - ಶಿವಮೊಗ್ಗ

ಸ್ಥಾಪನೆ : 16.06.1915

ತುಲಭಾರ ಚಕ್ರವರ್ತಿ

ಡಾ. ಪುಟ್ಟರಾಜ ಗವಾಯಿಗಳವರಿಗೆ ನಾಡವರು ಅರ್ಪಿಸುವ ತುಲಾಭಾರ ಡಾ. ಪುಟ್ಟರಾಜ ಗವಾಯಿಗಳವರ ವೀರೇಶ್ವರ ಪುಣ್ಯಶ್ರಮದಲ್ಲಿ ಸಾವಿರಾರು ಸಂಗೀತರಾರರನ್ನು ಕೀರ್ತನಗಾರರನ್ನು. ಕಲಾವಿದರನ್ನು ಹಾಗೂ ನಾಟಕಕಾರನ್ನು ರೂಪಿಸಿದ್ದಾರೆ. ವೀರೇಶ್ವರ ಪುಣ್ಯಾಶ್ರಮವು ಅನ್ನದಾಸೋಹದೊಂದಿಗೆ, ಜ್ಞಾನ ದಾಸೋಹವನ್ನು ನಿರಂತರವಾಗಿ ನಡೆಸುತ್ತಾ ಸಂಗೀತ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದೆ. ವೀರೇಶ್ವರ ಪೂಣ್ಯಶ್ರಮವು ಸಮಾಜಿಕ ಸಲ್ಲಿಸಿದ, ಸಲ್ಲಿಸುತ್ತಿರುವ ಸೇವೆಯನ್ನು ಮನಗಂಡ ನಾಡ ಜನತೆ, ಅಭಿಮಾನಿಗಳಯ ಭಕ್ತಿ, ಪ್ರೀತಿ, ಗೌರವಗಳ ಸಂಕೇತರೂಪದಲ್ಲಿ ಆಶ್ರಮಕ್ಕೆ ಸಹಾಯ ಸಹಕಾರ ಸಲ್ಲಿಸುತ್ತಲಿದ್ದಾರೆ. ಇಂಥ ಸಹಾಯದಲ್ಲಿ ಡಾ. ಪುಟ್ಟರಾಜ ಗವಾಯಿಗಳನ್ನು ಅಭಿಯನಂದಿಸುವ ಪುಟ್ಟರಾಜ ಗವಾಯಿಗಳವರ ತುಲಾಭಾರ ಕಾರ್ಯವು ಬಹು ವೈವಿಧ್ಯಮಯವಾದುದು. ಅವರ ಸಮತೂಕದ ರೂ. 15,000/- ಗಳಿಗಿಂತ ಹೆಚ್ಚು ಹಣವನ್ನು ಸಲ್ಲಿಸುವ ಈ ಕಾರ್ಯವು ಗವಾಯಿಗಳವರ ಸಂಸ್ಥೆಗಳಿಗೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಇಲ್ಲಿಯವರೆಗೆ ಪುಟ್ಟರಾಜರಿಗೆ ಅರ್ಪಿಸುವ ತುಲಾಭಾರಗಳು ಸಂಗೀತ ಗುರುವಿನ ಪ್ರೀತಿ-ಗೌರವ ಗಳಿಗೆ ಇದೊಂದು ಪ್ರತ್ಯಕ್ಷ ಸಾಕ್ಷಿಯಾಗಿರುವದಲ್ಲದೇ ಜಗತ್ತಿನ ಯಾವ ವ್ಯಕ್ತಿಗಳಿಗೂ ಇಷ್ಟೊಂದು ತುಲಾಭಾರಗಳು ನಡೆದ ದಾಖಲೆಗಳು ಇಲ್ಲ. ಅದುದರಿಂದ ಪುಟ್ಟರಾಜ ಗವಾಯಿಗಳವರಿಗೆ ನಾಡವರು ಅರ್ಪಿಸಿದ ಈ ತುಲಾಭಾರ ಸೇವೆಯ ವಿಶ್ವದಾಖಲೆಯಾಗಿದೆ.

 ಮಾನವ ತಾನು ಸಂಪಾದಿಸಿದ ಸಂಪತ್ತಿನಲ್ಲಿ ಕೆಲ ಭಾಗವನ್ನಾದರೂ ಧರ್ಮ ಕೈದಾನವಾಗಿ ಸಲ್ಲಸಬೇಕೆಂದು ಅದರಿಂದ ಸಮಾಜ ಋಣವನ್ನು ತೀರಿಸದಂತಾವುದುದೆಂದು ನಮ್ಮ ಸಂಸ್ಕೃತಿಯಲ್ಲಿ ಅನೇಕ ಧರ್ಮಬೋಧಕರು ಭೋದಿಸಿದ್ದಾರೆ. ತುಲಾಭಾರವು ಭಾರತೀಯ ಸಂಸ್ಕೃತಿಯಲ್ಲಿ ಬಹುಕಾಲದಿಂದಲೂ ಧಾರ್ಮಿಕ, ತಾತ್ವಿಕ ಅಂಶಗಳ ಆಧಾರ ಮೇಲೆ ವೈವಿಧ್ಯಮಯವಾಗಿ ಬಂದಿದೆ, ಭಕ್ತನೊಬ್ಬನು ಪರಮಾತ್ಮನ ತನ್ನ ಸಾಧನೆಯ ಸಫಲತೆಗೆ ಸಂಕಲ್ಪವನ್ನು ಹೊಂದುತ್ತಾನೆ. ಅದು ನೆರವೇರಿದರ ತನ್ನ ಸಾಮರ್ಥ್ಯಕ್ಕನುಗುಣವಾಗಿ ದಾನವನ್ನು  ದೇಣಿಗೆಯ ರೂಪದಲ್ಲಿ ಸಲ್ಲಿಸುತ್ತಾನೆ. ಇನ್ನು ಕೆಲ ಸಂದರ್ಭದಲ್ಲಿ ಪೂಜ್ಯರಿಗೆ ಅವರನ್ನು ಅಭಿನಂದಿಸುವದಕ್ಕಾಗಿ ಅವರ ತೂಕದ ದಾನವನ್ನು ನೀಡುವುದು ತುಲಾಭಾರದ ವಿಶೇಷತೆಯ ಮತ್ತೊಂದು ಪ್ರಕಾರವು. ಡಾ. ಪುಟ್ಟರಾಜ ಗವಾಯಿಗಳವರಿಗೆ ಅವರ ಶಿಷ್ಯರು, ಭಕ್ತರು, ಅಭಿಮಾನಿಗಳು ವಿಶೇಷ ಧಾರ್ಮಿಕ ಸಂದರ್ಭಗಳಲ್ಲಿ ಜಾತ್ರಾಮಹೋತ್ಸವಗಳಲ್ಲಿ ಪುರಾಣ ಮಂಗಲೋತ್ಸವದಲ್ಲಿ, ಗೃಹಪೂಜೆಯ ಕಾಲಕ್ಕೆ ಗವಾಯಿಗಳನ್ನು ಬರಮಾಡಿಕೊಂಡು ಅಲಂಕೃತವಾದ ತಕ್ಕಡಿಯಲ್ಲಿ ಆಸನರನ್ನಾಗಿಸಿ ಸಮಸ್ತ ಭಕ್ತಸಮೂಹದ ಎದುರಿನಲ್ಲಿ ಹಮ್ಮಣಿಯನ್ನು ಸಲ್ಲಿಸುತ್ತಾರೆ. ಇದರೊಂದಿಗೆ ಗವಾಯಿಗಳವರಿಗೆ ಹೊಸದಾದ ಬಟ್ಟೆ, ಪೇಠಾ, ಅವುಗಳನ್ನು ಕೆಲ ಸಂದರ್ಭದಲ್ಲಿ ಬಂಗಾರ ಉಂಗರುಗಳನ್ನು ಬೆಳ್ಳಿಯ ಪಾದುಕೆ, ಬೆತ್ತ. ಕಿರೀಟಿಗಳನ್ನು ಗೌರವಾರ್ಪಣೆಯಾಗಿ ಸಲ್ಲಿಸಿ ಗವಾಯಿಗಳವರ ಕೃಪೆಗೆ ಪಾತ್ರರಾಗುತ್ತಾರೆ. ಡಾ. ಪುಟ್ಟರಾಜ ಗವಾಯಿಗಳವರು ತಮಗೆ ತುಲಾಭಾರ ರೂಪದಲ್ಲಿ ಬಂದ ಹಣವನ್ನು ವಿದ್ಯಾರ್ಥಿಗಳ ದಾಸೋಹಕ್ಕಾಗಿ ಶಿಕ್ಷಣ ಅಭಿವೃದ್ಧಿಗಾಗಿ ನೂತನ ಕಟ್ಟಡಗಳ ಸ್ಥಾಪನೆಗಾಗಿ, ಸಾಹಿತ್ಯ ಪ್ರಕಟಣೆಗಾಗಿ ವಿನಿಯೋಗಿಸುತ್ತಾರೆ. ಪುಟ್ಟರಾಜ ಗವಾಯಿಗಳವರ ಮೊದಲ ತುಲಾಭಾರವು ಧಾರವಾಡದ ಮುರುಘಾಮಢದಲ್ಲಿ ಪೂಜ್ಯ ಶ್ರೀ ಮಹಂತಪ್ಪತಗಳಗವರಿಂದ ಪ್ರಾರಂಭಗೊಂಡಿತು. ಕರ್ನಾಟಕ ಬಹುತೇಕ ಮಠದಲ್ಲಿ ಗವಾಯಿಗಳವರ ತುಲಾಭಾರಗಳು ನಡೆದಿವೆ. ಈವರೆಗೆ ಎರಡು ಬಾರಿ ಬೆಳ್ಳಿ ತುಲಾಭಾರಗಳು 2114 ಕ್ಕೂ ಅಧಿಕವಾದ ಹಮ್ಮಣಿ ರೂಪದ ತುಲಾಭಾರಗಳು ನಡೆದು, ಸಾವಿರಾರು ಭಕ್ತರು ತುಲಾಭಾರಗಳ ಮುಂಗಡ ಹೆಸರುಗಳನ್ನು ಸೂಚಿಸುತ್ತಲೇ ಇದ್ದಾರೆ. ಓರ್ವ ವ್ಯಕ್ತಿಯ ಬದುಕಿನ ಇಷ್ಟೊಂದು ಸಂಖ್ಯೆಯಲ್ಲಿ ತುಲಾಭಾರಗಳಾಗುತ್ತಿರುವುದು ಒಂದು ರೋಮಾಂಚಕ ದಾಖಲೆಯೇ ಆಗಿದೆ. ರಾಷ್ಟಮಟ್ಟದಲ್ಲಿ ‘ಲಿಮಕಾ’ ದಾಖಲೆ ಪುಸ್ತಕಗಳಲ್ಲಿ ಈ ತುಲಾಭಾರಗಳ ಸರಮಾಲೆಯ ಬೃಹತ್ ಸಂಖ್ಯೆ ದಾಖಲಾಗಲು ಸಮಿತಿಯು ಪುಟ್ಟರಾಜ ಗವಾಯಿಗಳ ಹೆಸರನ್ನು ಸೂಚಿಸಿದೆ.  

ಗೌರವಾರ್ಪಣೆ ಪುಟ್ಟರಾಜ ಗವಾಯಿ ಪ್ರತಿಷ್ಠಾನೆ; 1999

ಪುಟ್ಟರಾಜ ಗವಾಯಿಗಳವರು ಸಂಗೀತಲೋಕದ ಅಪ್ರತಿಮ ದೃಷ್ಟಾರರು. ಅವರಲ್ಲಿ ವಿದ್ಯೆ ಪಡೆದ ವಿದ್ಯಾರ್ಥಿಗಳು ವಿಶ್ವದೆಡೆಯಲ್ಲಿ ತಮ್ಮ ಕಲಾ ಪ್ರತಿಭೆಯಿಂದ ಗವಾಯಿಗಳವರ ಹೆಸರನ್ನು ಎಲ್ಲೆಡೆಯಲ್ಲಿ ಮೊಳಗುವಂತೆ ಮಾಡಿದ್ದಾರೆ. ಪರಮಪೂಜ್ಯ ಶ್ರೀಮನ್ ನಿರಂಜನ್ ಜಗದ್ಗುರು ಗುರುಸಿದ್ದ ರಾಜಾಯೋಗೀಂದ್ರ ಮಹಾಸ್ವಾಮಿಗಳವರು ಶ್ರೀ ಮೂರುಸಾವಿರಮಠ ಹುಬ್ಬಳ್ಳಿ, ಗುರುಸಿದ್ದ ರಾಜಯೋಗಿಂದ್ರ ಹಾಗೂ ಪ್ರಸಿದ್ದ ಸಾಹಿತಿಗಳು ವಿಮರ್ಶಕರಾದ ಪ್ರೂ.  ಸದಾನಂದ ಕನವಳ್ಳಿ ಅವರ ನಿರ್ದೇಶನದಲ್ಲಿ ಗವಾಯಿಗಳವರ ಶಿಷ್ಯರಲ್ಲಿ ಒಬ್ಬರಾದ ಪ್ರೋ. ಎಂ.ವೆಂಕಟೇಶ ಕುಮಾರ, ಅವರು ತಮ್ಮ ಗುರುಗಳು ತಮಗೆ ಧಾರೆಯೆರೆದ ವಿದ್ಯೆಯ ಋಣವನ್ನು ಅಭಿನಂದಿಸುವದಕ್ಕೆ ಗೌರವ ಪೂರ್ಣವಾಗಿ ಸಂಸ್ಥೆಯೊಂದನ್ನು ಪುಟ್ಟರಾಜ ಗವಾಯಿ ಪ್ರತಿಷ್ಠಾನ; ಎಂಬ ಹೆಸರಿನಲ್ಲಿ 1999ರ ಜನೆವರಿ 20 ರಂದು ಸ್ಥಾಪಿಸಿದರು. ಈ ಪ್ರತಿಷ್ಠಾನವು  ಪ್ರತಿವರ್ಷವು ದೇಶದ ಪ್ರತಿಷ್ಠಿತ ಸಂಗೀತ ಕಲಾವಿದರಿಗೆ ರೂ. 25.000/-ಗಳನ್ನು ಒಳಗೊಂಡ ಪುಟ್ಟರಾಜ ಗವಾಯಿ ಪ್ರಶಸ್ತಿ; ನೀಡುವ ಯೋಜನೆಯನ್ನು ಹಾಕಿಕೊಂಡು ಬಂದಿದೆ. ಈ ಪ್ರಶಸ್ತಿಯು ಕರ್ನಾಟಕಕ್ಕೆ ಮೀಸಲಾಗಬಾರದು, ರಾಷ್ಟ್ರೀಯ ಮಟ್ಟದ ಸಾಧನೆಯನ್ನು ಮಾಡಿ ಅವಜ್ಞೆಗೆ ಒಳಗಾದ ಸಂಗೀತಗಾರರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡುವ ಮೂಲಕ ಪ್ರತಿಷ್ಠಾನದ ಖ್ಯಾತಿಯನ್ನು ರಾಷ್ಟ್ರಮಟ್ಟಕ್ಕೆ ತಲುಪಿಸಿದ್ದಾರೆ.

1999ರಲ್ಲಿ ಲಕ್ಷ್ಮಣರಾವ್ ಪಂಡಿತ, ಪುಟ್ಟರಾಜರ ಪ್ರಶಸ್ತಿ ಪಡೆದ ಮೊದಲ ಸಂಗೀತಗಾರರು. ನಂತರ ಪ್ರಶಸ್ತಿ ಪಡೆದವರಲ್ಲಿ ದಿನಕರ ಕಾಯ್ಕಿಣಿ, ಮೃತ್ಯುಂಜಯ ಬುವಾ, ಚಂದ್ರಶೇಖರ್ ಪುರಾಣಿಕ, ಪಂಚಾಕ್ಷರ ಸ್ವಾಮಿ ಮತ್ತಿಕಟ್ಟಿ, ‘ಪುಟ್ಟರಾಜ ಗವಾಯಿ ಪ್ರಶಸ್ತಿ’ ಪಡೆದ ಸಂಗೀತಗಾರರಾಗಿದ್ದಾರೆ.

ಸುವರ್ಣ ಕಿರೀಟ ಸಮರ್ಪಣೆ:- ಪಂಡಿತ ಪಂಚಾಕ್ಷರ ಗವಾಯಿಗಳವರ ಐವತ್ತೇಳನೇಯ ಪುಣ್ಯಸ್ಮರಣೋತ್ಸವದಲ್ಲಿ ದಿ.11-ಜೂನ್-2001ರಂದು ಡಾ. ಪುಟ್ಟರಾಜ ಗವಾಯಿಗಳವರಿಗೆ ಅಭಿಮಾನಿಗಳು, ಶಿಷ್ಯರು, ಪೌರರು ಬಂಗಾರದ ಕಿರೀಟವನ್ನು ಧಾರಣೆಮಾಡಿ ತಮ್ಮ ಗೌರವವನ್ನು ಅರ್ಪಿಸಿದರು.

News & Events