ಶ್ರೀ ವೀರೇಶ್ವರ ಪುಣ್ಯಾಶ್ರಮ ಗದಗ - ದಾವಣಗೆರೆ - ಶಿವಮೊಗ್ಗ

ಸ್ಥಾಪನೆ : 16.06.1915

ಪಂ. ಪುಟ್ಟರಾಜ ಗವಾಯಿಗಳ ಅಂಧರ ಶಿಕ್ಷಣ ಸಂಸ್ಥೆ

ಸ್ಥಾಪನೆ

ಮಾನವನ ಜೀವನ ಸುಂದರವಾಗಲು ಬೇಕಾಗುವ ಅವಶ್ಯಕ ಮೌಲ್ಯಗಳಲ್ಲಿ ಶಿಕ್ಷಣ ಅತ್ಯಂತ ಪ್ರಮುಖವಾದುದು. ಮಾನವ ಜೀವಿಯ ಮೂಲಭೂತ ಬೇಡಿಕೆಗಳಲ್ಲಿ ಒಂದಾದ ಶಿಕ್ಷಣವನ್ನು ಅಂಧ-ಅನಾಥ  ಮಕ್ಕಳಿಗೆ ದೊರೆಯುವಂತೆ ಮಾಡಲು ಪುಟ್ಟರಾಜ ಗವಾಯಿಗಳವರ ತಮ್ಮ ಶಿಷ್ಯಬಳಗ, ಹಾಗೂ ಆಶ್ರಮದ ಹಿತೈಷಿಗಳೊಂದಿಗೆ ಸಮಾಲೋಚಿಸಿ ಶಿಕ್ಷಣ ಸಂಸ್ಥೆಯನ್ನು ಸ್ಥಾಫಿಸುವ ನಿರ್ಧಾರಕ್ಕೆ ಬಂದರು. ವೀರೇಶ್ವರ ಪುಣ್ಯಾಶ್ರಮದಲ್ಲಿ ಗುರುಕುಲ ವ್ಯವಸ್ಥೆಯ ಅಭ್ಯಾಸ ಕ್ರಮವು ಮಕ್ಕಳಿಗೆ ದೊರೆಯುವಂತಾಗಬೇಕೆಂಬ ಸುದುದ್ದೇಶದಿಂದ ನಾಗರಿಕರು, ಹಿತೈಷಿಗಳು ಡಾ.ಪುಟ್ಟರಾಜ ಗವಾಯಿಗಳವರ ಹೆಸರಿನಲ್ಲಿ ಕ್ರಿ.ಶ.1990ರಲ್ಲಿ ಸಂಸ್ಥೆಯನ್ನು ಸ್ಥಾಪಿಸಿದರು. ಡಾ.ಪುಟ್ಟರಾಜ ಗವಾಯಿಗಳವರು ಅಧ್ಯಕ್ಷರಾಗಿ ಹಾನಗಲ್ಲ ವಿರಕ್ತಮಠದ ಶ್ರೀ ಮ.ನಿ.ಪ್ರ.ಕುಮಾರ ಮಹಾಸ್ವಾಮಿಗಳವರು ಕಾರ್ಯಾಧ್ಯಕ್ಷರಾಗಿ ಇತರ ಒಂಭತ್ತು ಜನ ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಸಮಿತಿಯನ್ನು ರಚಿಸಿ ಸಂಸ್ಥೆಯನ್ನು ಮುಂದುವರಿಸಿದರು. ಅಂಧ-ಅನಾಥ ಮಕ್ಕಳಿಗೆ ಆಶ್ರಯ ನೀಡಿ, ಅವರ ಪಾಲನೆಯೊಂದಿಗೆ ಶಿಕ್ಷಣವನ್ನು ದೊರಕಿಸಿ ಸುಸಂಸ್ಕೃತ ನಾಗರಿಕರನ್ನಾಗಿ ಬೆಳೆಸಬೇಕು. ತಮ್ಮ ಸ್ವಾವಲಂಬನೆ ಬದುಕಿಗೆ ಸನ್ನದ್ದರಾಗುವಂತೆ ವಿಚಾರವಂತರನ್ನಾಗಿಸಬೇಕೆಂಬ ಮಹೋದ್ದೇಶದಿಂದ ಸ್ಥಾಪಿಸಿದ ಈ ಸಮಿತಿಯ ಅಂಗ ಸಂಸ್ಥೆಗಳಾಗಿ ಶಿಕ್ಷಣ ಪ್ರಸಾರ ಮಾಡುತ್ತಿರುವ ಅನೇಕ ಶಿಕ್ಷಣ ಸಂಸ್ಥೆಗಳನ್ನು ಕಾಲಾಂತರದಲ್ಲಿ ಸ್ಥಾಪಿಸಲಾಯಿತು. 

News & Events