ಶ್ರೀ ವೀರೇಶ್ವರ ಪುಣ್ಯಾಶ್ರಮ ಗದಗ - ದಾವಣಗೆರೆ - ಶಿವಮೊಗ್ಗ

ಸ್ಥಾಪನೆ : 16.06.1915

ಅಂಗ ಶಿಕ್ಷಣ ಸಂಸ್ಥೆಗಳು

ಅಂಗ ಸಂಸ್ಥೆಗಳು.

  1. ಮಾತೋ ಶ್ರೀ ನೀಲಮ್ಮ ನವರ ಕನ್ನಡ ಮಾಧ್ಯಮ ಶಿಶು ಮಂದಿರ-1991.
  2. ಪಂಡಿತ ಡಾ.ಪುಟ್ಟರಾಜ ಗವಾಯಿಗಳವರ ಅಂಧರ ವಸತಿಯುತ ಸಂಗೀತ ಪಾಠ ಶಾಲೆ -1991.
  3. ಡಾ.ಪುಟ್ಟರಾಜ ಕವಿ ಗವಾಯಿಗಳವರ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವಸತಿಯುತ ಪ್ರಸಾದ ನಿಲಯ - 1991.
  4. ಪಂಡಿತ ಪಂಚಾಕ್ಷರ ಗವಾಯಿಗಳವರ ಹಿರಿಯ ಪ್ರಾಥಮಿಕ ಶಾಲೆ-1992
  5. ಪಂಡಿತ ಪಂಚಾಕ್ಷರ ಗವಾಯಿಗಳವರ ಪ್ರೌಢಶಾಲೆ -1992
  6. ಶ್ರೀ ಕುಮಾರೇಶ್ವರ ಸಂಗೀತ ಪಾಠಶಾಲೆ.
  7. ಪಂ.ಪಂಚಾಕ್ಷರ ವಾಯಿಗಳವರ ಸಂಗೀತ ಮಹಾವಿದ್ಯಾಲಯ.
  8. ಪಂ.ಪಂಚಾಕ್ಷರ ಗವಾಯಿಗಳವರ ಕಲಾ ಮಹಾವಿದ್ಯಾಲಯ.
  9. ಪಂ.ಪಂಚಾಕ್ಷರ ಗವಾಯಿಗಳವರ ಪ್ರಾಥಮಿಕ ಬ್ರೈಲ್ ಲಿಪಿ ಶಾಲೆ
  10. ಶ್ರೀ ಕುಮಾರೇಶ್ವರ ಕೃಪಾಪೋಷಿತ ಡಾ.ಪುಟ್ಟರಾಜ ಕವಿ ಗವಾಯಿಗಳವರ ಸಂಸ್ಕೃತ ಪಾಠ ಶಾಲೆ. 10.09.1990

 

ಪಂಡಿತ ಪಂಚಾಕ್ಷರ ಗವಾಯಿಗಳವರ ಅಂಧರ ವಸತಿಯುತ ಪಾಠಶಾಲೆ:

ಈ ವಿದ್ಯಾ ಸಂಸ್ಥೆಯು 1991ರಲ್ಲಿ ಸ್ಥಾಪಿಸಲ್ಪಟ್ಟು ಅಂಧಮಕ್ಕಳ ಪಾಲನೆ ಮತ್ತು ಫೋಷಣೆಯೊಂದಿಗೆ ವಸತಿ ಸೌಕರ್ಯವನ್ನು ಕಲಿಯುವ ವಿದ್ಯಾರ್ಥಿಗಳಿಗೆ ವ್ಯವಸ್ಥೆ ಮಾಡಲಾಗಿದೆ. ಎಂಟು ವರ್ಷದ ವಯೋಮಿತಿ ಮಕ್ಕಳಿಗೆ ಪ್ರವೇಶವನ್ನು ನೀಡುವದರೊಂದಿಗೆ ಸಂಗೀತ  ವಿದ್ಯೆಯನ್ನು ಪಠ್ಯವಾಗಿ ಬೋಧಿಸಲಾಗುತ್ತದೆ. ಇದರಲ್ಲಿ ಜ್ಯೂನಿಯರ್, ಸೀನಿಯರ್, ವಿದ್ವತ್ ಎಂಬ ಮೂರು ವಿಭಾಗಗಳಿದ್ದು ತಾಳವಾದ್ಯ, ಗಾಯನ, ಸಂಗೀತವನ್ನು ಬೋಧಿಸಲಾಗುವುದು. ಜೂನಿಯರ್ ವಿಭಾಗದಲ್ಲಿ ಎಂಟು ವರ್ಷದಿಂದ ಎಸ್.ಎಸ್.ಎಲ್. ಸಿ.ವರೆಗೆ ಅಭ್ಯಸಿಸಿದ ವಿದ್ಯಾರ್ಥಿಗಳು ಅಧ್ಯಯನ ಮಾಡುವರು. ಸೀನಿಯರ್ ವಿಭಾಗದಲ್ಲಿ ಹದಿನೆಂಟು ವರ್ಷದ ವಿದ್ಯಾರ್ಥಿಗಳಿಂದ ಬಿ.ಎ. ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳು ಅಧ್ಯಯನವನ್ನು ಮಾಡುವರು. ವಿದ್ವತ್ ವಿಭಾಗಗದಲ್ಲಿ ಮೂವತ್ತು ವರ್ಷದಿಂದ ಮೂವತ್ರೈದು ವಯೋಮಿತಿಯ ವಿದ್ಯಾರ್ಥಿಗಳು ಅಧ್ಯಯನ ಮಾಡುವರು.

     ಇಲ್ಲಿ ಅಭ್ಯಸಿಸುವ ವಿದ್ಯಾರ್ಥಿಗಳು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಬೆಂಗಳೂರು ಇವರು ನಡೆಸುವ ಪರೀಕ್ಷೆಗಳನ್ನು ಬರೆಯುವರು. ಈ ಸಂಗೀತ ಪಾಠ ಶಾಲೆಯಲ್ಲಿ ಅಭ್ಯಸಿಸಿ ಉತ್ತೀರ್ಣರಾದ ಪದವೀಧರರನ್ನು ಪ್ರಾಥಮಿಕ ಶಿಕ್ಷಣ; ಮಾಧ್ಯಮಿಕ ಶಿಕ್ಷಣ ಹಾಗೂ ಮಹಾವಿದ್ಯಾಲಯದ ಪದವಿ ಶಿಕ್ಷಣದ ಸಂಸ್ಥೆಗಳಲ್ಲಿ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸುವ ಅರ್ಹತೆಯನ್ನು ಹೊಂದುವರು.

         ಪ್ರತಿಯೊಂದು ವಿಭಾಗದಲ್ಲಿ 30 ರಿಂದ 40 ವಿದ್ಯಾರ್ಥಿಗಳು ಅಭಾಸ ಮಾಡುವರು. ಹತ್ತು ವರ್ಷಗಳ ನಿರಂತರ ವಿದ್ಯಾದಾನವನ್ನು ಮಾಡುತ್ತಿರುವ ಈ ಸಂಸ್ಥೆಯು ಸರಕಾರದಿಂದ ಅನುದಾನವನ್ನು ಪಡೆಯುವುದು. 28 ಜನ  ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಯನ್ನು ಹೊಂದಿದ  ಈ ಸಂಸ್ಥೆಯ ಎಲ್ಲಾ ಆಗು ಹೋಗುಗಳ ಬಗ್ಗೆ ಡಾ|| ಪುಟ್ಟರಾಜ ಗವಾಯಿಗಳು ನಿರಂತರ ಮಾರ್ಗದರ್ಶನ ಸಲಹೆಗಳನ್ನು ನೀಡುತ್ತಾರೆ-ಸಂಸ್ಥೆಯ ಉತ್ತರೋತ್ತರ ಅಭಿವೃದ್ಧಿಗಾಗಿ ಶಿಕ್ಷಕರಿಗೆ ವಿದ್ಯಾರ್ಥಿಗಳಿಗೆ ಕ್ರಿಯಾಶೀಲ ಸಂಸ್ಕೃತಿ ಚಟುವಟಿಕೆಗಳೊಂದಿಗೆ ಸಂಸ್ಥೆಯು ಆನೇಕ ಒಳ್ಳೆಯ ಗಾಯಕರನ್ನು ನಾಡಿಗೆ ಕೊಡುಗೆಯಾಗಿ ಸಲ್ಲಿಸಿದೆ. ಪ್ರಸ್ತುತ ಸಂದರ್ಭದಲ್ಲಿ ಶ್ರೀ ಎ.ಎಂ.ಆರ್. ರೇವಣಸಿದ್ದಯ್ಯ ಮುಖ್ಯೊಪಾಧ್ಯಾರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

 

ಪಂಡಿತ ಪಂಚಾಕ್ಷರ ಗವಾಯಿಗಳವರ ಪ್ರೌಢಶಾಲೆ

 1992ರಲ್ಲಿ ಸ್ಥಾಪಿತವಾದ ಪಂಡಿತ ಪಂಚಾಕ್ಷರ ಗವಾಯಿಗಳ ಪ್ರೌಢ ಶಾಲೆಯು 1663ರಲ್ಲಿ ಸರಕಾರದಿಂದ ಅನುಮತಿಯನ್ನು ಪಡೆದುಕೊಂಡು ಮಾಧ್ಯಮಿಕ ಶಿಕ್ಷಣವನ್ನು ನೀಡುವ ಉದ್ದೇಶದಿಂದಿಗೆ ಉದ್ದೇಶದೊಂದಿಗೆ ಎಂಟನೆಯ ವರ್ಗವನ್ನು ಪ್ರಾರಂಭಿಸಿತು. 36 ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡರು. 1994 ರಲ್ಲಿ 40 ವಿದ್ಯಾರ್ಥಿಗಳೊಂದಿಗೆ ಒಂಭತ್ತನೆಯ ವರ್ಗವನ್ನು 1995ರ 38 ವಿದ್ಯಾರ್ಥಿಗಳೊಂದಿಗೆ ಹತ್ತನೆಯ ವರ್ಗವನ್ನು ಪ್ರಾರಂಭಿಸಿ ಸಂಪೂರ್ಣ ಮಾಧ್ಯಮಿಕ ಶಾಲೆಯಾಗಿ ರೂಪಗೊಂಡಿತು. ಈಗಾಗಲೇ 8 ಜನ ಶಿಕ್ಷಕರು, ಮೂವರು ಶಿಕ್ಷಕೇತರ ಸಿಬ್ಬಂದಿಯನ್ನು ಒಳಗೊಂಡ ಈ ಶಾಲೆಯು ಸಾಧನೆಯನ್ನು ನೂರಾರು ವಿದ್ಯಾರ್ಥಿಗಳನ್ನು ಪ್ರತಿಭಾವಂತರನ್ನು ನಿರ್ಮಿಸುವಲ್ಲಿ ಉತ್ತಮ ಸಾಧನೆಯನ್ನು ಸಾಧಿಸಿದೆ. ಶ್ರೀ ಟಿ.ಎಸ್. ಮಠದ ಪ್ರಾರಂಭದ `ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದರು. ಪ್ರಸ್ತುತ ಸಂದರ್ಭದಲ್ಲಿ ಶ್ರೀ ಎಸ್. ಬಿ. ಹಾದಿಯವರು ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

 

ಪಂಡಿತ ಪಂಚಾಕ್ಷರ ಗವಾಯಿಗಳವರ ಸಂಗೀತ ಮಹಾವಿದ್ಯಾಲಯ: 1991

ಪಂಡಿತ ಪಂಚಾಕ್ಷರ ಗವಾಯಿಗಳವರ ಸಂಗೀತ ಮಹಾವಿದ್ಯಾಲಯವು ಪದವಿ ವರ್ಗಗಳನ್ನು ನಡೆಸುತ್ತಿದ್ದು, ಕರ್ನಾಟಕ ವಿಶ್ವ ವಿದ್ಯಾಲಯದ ಸಂಲಗ್ನಗೊಂಡ ಮಹಾವಿದ್ಯಾಲಯದವಾಗಿದೆ. 1991ರಲ್ಲಿ ಸ್ಥಾಪನೆಗೊಂಡ ಈ ಮಹಾವಿದ್ಯಾಲಯವು ಕರ್ನಾಟಕದಲ್ಲಿಯೇ ಪ್ರಥಮವಾಗಿ ಸಂಗೀತಕ್ಕಾಗಿ ಮೀಸಲಿಟ್ಟಿ ವಿಶಿಷ್ಟ ಮಹಾವಿದ್ಯಾಲಯವಾಗಿ. ಅಂಗಹೀನ, ಅಂಧ ಹಾಗೂ ಅನಾಥ ಮಕ್ಕಳಿಗೆ ವಿಶೇಷ ಸೌಲಭ್ಯದೊಂದಿಗೆ ಸಂಗೀತ ವಿಷಯದಲ್ಲಿ ಪದವಿಯನ್ನು ನೀಡಲಾಗುವುದು. ಸಂಗೀತ ಮಹಾವಿದ್ಯಾಲಯದಲ್ಲಿ ಕನ್ನಡ, ಇಂಗ್ಲೀಷ್, ಹಿಂದಿ ಹಾಗೂ ಸಂಸ್ಕೃತ ಭಾಷಾ ವಿಷಯಗಳೊಂದಿಗೆ ಸಂಗೀತ ಕ್ಷೇತ್ರದ ಖಯಾಲ, ವಾಯಲಿನ, ತಬಲಾ, ಸಿತಾರ, ಠುಮರಿ ಪ್ರಧಾನ  ಹಾಗೂ ಸಮಾನ  ವಿಷಯಗಳನ್ನಾಗಿ ಆಯ್ಕೆ ಮಾಡಿ ಕೊಂಡು ವಿದ್ಯಾರ್ಥಿಗಳು ಮೂರು  ವರ್ಷಗಳ ಪದವಿಯನ್ನು  ಪಡೆಯುವ ಅರ್ಹತೆಯನ್ನು ಹೊಂದುವರು. ಸಂಗೀತದಲ್ಲಿಯ ಇಪ್ಪತ್ತೊಂದು ವಿಷಯಗಳ ಭೋಧನೆಯನ್ನು ಮಾಡಲಾಗುತ್ತಿದೆ. ವಿಷಯಕ್ಕೆ ಸಂಬಂದಿಸಿದಂತೆ,ಆಡಳಿತಕ್ಕೆ ಸಂಬಂದಿಸಿದಂತೆ  ಬೋಧಕ ಬೋಧಕೇತರ ಸಿಬ್ಬಂದಿಯನ್ನು ಒಳಗೊಂಡ ಪಂಚಾಕ್ಷರ  ಗವಾಯಿಗಳವರ ಸಂಗೀತ ಮಹಾವಿದ್ಯಾಲಯವು 18-2-1999ರಲ್ಲಿ ಅನುದಾನಕ್ಕೆ ಒಳಪಟ್ಟಿದೆ. ಆನೇಕ  ಪ್ರತಿಭಾವಂತ ಕಲಾವಿದರನ್ನು ನಾಡಿಗೆ ನೀಡಿದ ಶ್ರೇಯಸ್ಸು ಈ ಶಿಕ್ಷಣ ಸಂಸ್ಥೆಗೆ ಲಭಿಸಿದೆ.

 

ಪಂಡಿತ ಪಂಚಾಕ್ಷರ ಗವಾಯಿಗಳವರ ಕಲಾ ಮಹಾವಿದ್ಯಾಲಯ 1991-92  

ಕಲಾ ವಿಭಾಗದ ಸಂಸ್ಥೆಯಾಗಿ 1991 ರಲ್ಲಿ ಸ್ಥಾಪನೆಗೊಂಡ ಪಂಡಿತ ಪಂಚಾಕ್ಷರ ಗವಾಯಿಗಳವರ ಕಲಾ ಮಹಾವಿದ್ಯಾಲಯವು ಕರ್ನಾಟಕ ವಿಶ್ವವಿದ್ಯಾಲಯದಿಂದ ಸಂಲಗ್ನಗೊಂಡಿದೆ. ಸಂಗೀತದೊಂದಿಗೆ ಇತರ ಸಾಮಾಜಿಕ ವಿಷಯಗಳ ಪರಿಜ್ಙಾನವು ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ದೊರೆಯುವಂತಾಬೇಕೆಂಬ ಉದ್ದೇಶದಿಂದ ಡಾ. ಪುಟ್ಟರಾಜ ಗವಾಯಿಗಳವರು ಪದವಿ ಕಲಾ ಮಹಾವಿದ್ಯಾಲಯವನ್ನು ಸ್ಥಾಪಿಸಿದರು. 16 ಜನ ವಿವಿಧ ವಿಷಯಗಳಲ್ಲಿ  ಪರಿಗಣಿತರಾದ ಪ್ರಾಧ್ಯಾಪಕರು, 14 ಜನ ಬೋಧಕೇತರ ಸಿಬ್ಬಂದಿ ವರ್ಗವು ಕಾರ್ಯ ನಿರ್ವಹಿಸುತ್ತಿದ್ದು. ಹನ್ನೊಂದು ವರ್ಷಗಳ ಅವಧಿಯಲ್ಲಿ ಪ್ರತಿಭಾವಂತರನ್ನು ನಿಮಾರ್ಣಮಾಡಿ ನಾಡಿಗೆ ಸಲ್ಲಿಸಿದ ಮಹತ್ ಸಾಧನೆ ಈ ಮಹಾವಿದ್ಯಾಲಯಕ್ಕೆ ಸಲ್ಲುತ್ತದೆ. ಪ್ರಾಚಾರ್ಯರಾಗಿ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಪ್ರೋ. ಬಿ.ಇ.ಹಿರೇಮಠಅವರು ಸೇವೆ ಸಲ್ಲಿಸುತ್ತಿದ್ದಾರೆ. ಮಹಾವಿದ್ಯಾಲಯವು ವೀರೇಶ್ವರ ಪೂಣ್ಯಾಶ್ರಮದ ಪ್ರಶಾಂತ ವಾತಾವಣದರಲ್ಲಿ ತನ್ನ ಶೈಕ್ಷಣಿಕ ಸೇವೆಯನ್ನು ಸಲ್ಲಿಸುವದರೊಂದಿಗೆ ಡಾ,. ಪುಟ್ಟರಾಜ ಗವಾಯಿಗಳವರ ಶೈಕ್ಷಣಿಕ ಸೇವೆಯ ಸಾಧನೆಯನ್ನು ನಾಡವರಿಗೆ ಅರ್ಥೈಸಿಕೊಡುತ್ತಲಿದೆ. ಪ್ರತಿ ವರ್ಷವೂ ಮಹಾವಿದ್ಯಾಲಯವು 300-500 ವರೆಗೆ ವಿದ್ಯಾರ್ಥಿಗಳಿಗೆ ಪ್ರವೇಶವನ್ನು ನೀಡಿ ಜ್ಞಾನಾರ್ಜನೆ ಮಾಡುವದರೊಂದಿಗೆ ನಿತ್ಯ ಜ್ಞಾನ ದಾಸೋಹವನ್ನು ಗೈಯುತ್ತಲಿದೆ. ಪ್ರತಿ ವರ್ಷವೂ ಉತ್ತಮ ಫಲಿತಾಂಶ ನೀಡುವುದರೊಂದಿಗೆ ಮಕ್ಕಳಲ್ಲಿ ಸೃಜನಾತ್ಮಕ ಕಲೆಯನ್ನು ಬೆಳೆಸುವದರೊಂದಿಗೆ ಶಿಕ್ಷಣ ಪ್ರಸಾರವನ್ನು ನಿರಂತವಾಗಿಸಿಕೊಂಡು ಸಾಗುತ್ತಲಿದೆ.

 

ಪಂಡಿತ ಪಂಚಾಕ್ಷರ ಗವಾಯಿಗಳವರ ಹಿರಿಯ ಪ್ರಾಥಮಿಕ ಶಾಲೆ, 1991

ಡಾ. ಪುಟ್ಟ ರಾಜ ಗವಾಯಿಗಳವರ ಕಾರ್ಯರಂಗವಾಗಿರುವ ಪಂಚಾಕ್ಷರ ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ 1992-93ರಲ್ಲಿ ಸ್ಥಾಪಿತವಾದ ಈ ಪ್ರಾಥಮಿಕ ಶಾಲೆಯ ಪ್ರಥಮ ತರಗತಿಯೊಂದಿಗೆ ಪ್ರಾರಂಭಗೊಂಡು ಸಂಪೂರ್ಣ ಹಿರಿಯ ಪ್ರಾಥಮಿಕ ಶಾಲೆಯಾಗಿ ರೂಪುಗೊಂಡಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಅನುಮತಿಯನ್ನು ಪಡೆದುಕೊಂಡು ನಡೆಯುತ್ತಿದ್ದಾರೆ.  ಈ ಶಾಲೆಯಲ್ಲಿ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿವರ್ಷ ಶಿಕ್ಷಣ  ಪಡೆಯುತ್ತಿದ್ದಾರೆ. ಶಿಕ್ಷಕರಾದ ಶ್ರೀ ಕುಮಾರೇಶ್ವರ ಹಿರೇಮಠ ಅವರು ಶಾಲೆ ಮುಖ್ಯೋಪಾಧ್ಯಾಯರಾಗಿದ್ದಾರೆ.

 

ಶ್ರೀ ಕುಮಾರೇಶ್ವರ ಕೃಪಾಪೋಷಿತ ಡಾ. ಪುಟ್ಟರಾಜ ಗವಾಯಿಗಳವರ ಸಂಸ್ಕೃತ ಪಾಠಶಾಲೆ ಕ್ರಿ.ಶ 1990 :

ಡಾ.ಪುಟ್ಟರಾಜ ಗವಾಯಿಗಳವರು ಸಂಸ್ಕೃತ ಅಧ್ಯಯನವನ್ನು ಮಾಡಿರುವುದಲ್ಲದೆ ಆ ಭಾಷೆಯಲ್ಲಿ ಸಾಹಿತ್ಯ ರಚನೆಯನ್ನು ಮಾಡಿದ ಕವಿಗಳು; ಭಾರತ ಸಂಸ್ಕೃತಿಯ ಅಪಾರವಾದ ಜ್ಙಾನವನ್ನು ತನ್ನಲ್ಲಿರಿಸಿಕೊಂಡಿರುವ ಸಂಸ್ಕೃತ ಭಾಷೆಯನ್ನು ಮಕ್ಕಳು ಅಭ್ಯಾಸ ಮಾಡುವದರಿಂದ ವಿಶೇಷ ಜ್ಞಾನವನ್ನು ಪಡೆಯಲು ಸಾಧ್ಯವಾಗುವುದೆಂಬ ಸದುದ್ದೇಶದಿಂದ ಆಶ್ರಮದಲ್ಲಿ ಸಂಸ್ಕೃತ ಪಾಠಶಾಲೆಯನ್ನು ಕ್ರಿ.ಶ. 1990ರಲ್ಲಿ  ಪ್ರಾರಂಭ ಮಾಡಿದರು. ಈ ಪಾಠ ಶಾಲೆಯಲ್ಲಿ ಪ್ರಥಮ, ಕಾವ್ಯ, ಸಾಹಿತ್ಯ ಎಂಬ ಪರೀಕ್ಷೆಗಳನ್ನು ನಡೆಸಲಾಗುವುದು. ಹೆಚ್ಚು ವಿದ್ಯಾರ್ಥಿಗಳು ವೇದಾಧ್ಯಯನದಿಂದ ಸಂಸ್ಕೃತ ಭಾಷೆಯ ಮೇಲೆ ಅಭಿರುಚಿಯನ್ನು ಹುಟ್ಟುವಂತೆ ಡಾ.ಪುಟ್ಟರಾಜ ಗವಾಯಿಗಳವರ ಈ ಪಾಠಶಾಲೆಯ ಮೂಲಕ ನೆರವೇರಿಸುತ್ತಲ್ಲಿದ್ದಾರೆ. ಸಾಕಷ್ಟು ವಿದ್ಯಾರ್ಥಿಗಳು ಸಂಸ್ಕೃತ ಅಧ್ಯಯನವನ್ನು ಕೈಗೊಂಡಿದ್ದಾರೆ. ಶ್ರೀಯುತ ರಾಚಯ್ಯ ದೇವರು ಹಿರೇಮಠ ಸಂಸ್ಕೃತ ಭಾಷೆಯ ಜ್ಞಾನವನ್ನು ಮಕ್ಕಳಿಗೆ ಭೋದಿಸುವದರೊಂದಿಗೆ ಪಾಠಶಾಲೆಯ ಪ್ರಗತಿ ಹಾಗೂ ಶ್ರೇಯಸ್ಸಿಗೆ ಪರಿಶ್ರಮ ಪಡುವದರೊಂದಿಗೆ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಸಂಗೀತ ಪರೀಕ್ಷೆಗಳು ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯವರು ನಡೆಸುವ ಸಾಮಾನ್ಯ ಶಿಕ್ಷಣ ಪದ್ಧತಿಯನ್ನು ಅನುಸರಿಸುತ್ತವೆ.

 

ಪಂಡಿತ ಪಂಚಾಕ್ಷರ ಗವಾಯಿಗಳವರ ಅಂಧರ ವಸತಿಯುತ ಪ್ರಾಥಮಿಕ ಬ್ರೈಲ್ ಲಿಪಿ ಶಾಲೆ 1994-95 :

ಕಣ್ಣಿಲ್ಲದ ಮಕ್ಕಳು ಅಕ್ಷರ ಕಲಿಕೆಯ ಮೂಲಕ ಜ್ಞಾನವನ್ನು ಪಡೆಯಲು ಸಾಧ್ಯವಾಗುವ ಲಿಪಿ ಬ್ರೈಲ್ ಲಿಪಿ. ಅಂಧರು ಓದುವ ಬರೆಯುವ ಅಭ್ಯಾಸದ  ಅಭಿರುಚಿ, ಉತ್ಸಾಹವನ್ನು ಹಾಗೂ ಅಕ್ಷರಸ್ಥರನ್ನಾಗಿಸುವ ಮಹೋದ್ದೇಶದಿಂದ 1994-95ರಲ್ಲಿ ಪಂಡಿತ ಪಂಚಾಕ್ಷರ ಗವಾಯಿಗಳವರ ಅಂಧರ ಬ್ರೈಲ್ ಲಿಪಿ ಶಾಲೆಯನ್ನು ಪ್ರಾರಂಭವಾಗುವದು. 6 ರಿಂದ 11  ವರ್ಷದ ವರೆಗೆ ಒಂದನೇ ವರ್ಗಕ್ಕೆ ಪ್ರವೇಶವನ್ನು ನೀಡಲಾಗುವುದು. ಕನ್ನಡ ಪ್ರಾಥಮಿಕ ಶಾಲೆಯ ಪಠ್ಯಕ್ರಮದ  ಒಂದನೆ ವರ್ಗಕ್ಕೆ ಪ್ರವೇಶವನ್ನು ನೀಡಲಾಗುವುದು. ಕನ್ನಡ ಪ್ರಾಥಮಿಕ ಶಾಲೆ ಪಠ್ಯಕ್ರಮವನ್ನು ಈ ಶಾಲೆಯಲ್ಲಿ ಬ್ರೈಲ್ ಲಿಪಿಯ ಮೂಲಕ ಕಲಿಸಲಾಗುವುದು. ಒಂದನೇ ವರ್ಗದಿಂದ ನಾಲ್ಕನೇ ವರ್ಗದವರಗೆ ವಿಷಯಗಳನ್ನು ಮೌಖಿಕವಾಗಿ ಬೋದಿಸಲಾಗುತ್ತದೆ. ಐದನೇ ತರಗತಿಯಲ್ಲಿ ಅಕ್ಷರ ಬರವಣಿಗೆಯನ್ನು ಮಕ್ಕಳಿಗೆ ಮನನ ಮಾಡಿಕೊಡಲಾಗುತ್ತದೆ. ಮಕ್ಕಳಿಗೆ ಸ್ಪರ್ಶಜ್ಞಾನವೇ ಪ್ರಮುಖವಾದ ಅಂಶವಾಗಿದ್ದು; ಮಕ್ಕಳು ನೇತ್ರಹೀನರಾಗಿದ್ದು ಕಲಿಕೆಯ ಬುಹುಪಾಲು ಜ್ಞಾನವನ್ನು ಚಿಕ್ಕಿಗಳನ್ನು ಸ್ಪರ್ಶಿಸುವ ಮೂಲಕ ಗುರುತಿಸುತ್ತಾರೆ. ಕನ್ನಡ, ಗಣಿತ, ವಿಜ್ಞಾನ, ಇಂಗ್ಲೀಷ್  ಹಾಗೂ ಸಂಗೀತ ವಿದ್ಯೆಯನ್ನು ಭೋದಿಸಲಾಗುತ್ತದೆ. ಸಧ್ಯದಲ್ಲಿ ಒಂದರಿಂದ ಆರು ವರ್ಗಗಳು ನಡೆಯುತ್ತವೆ. ಪ್ರತಿಯೊಂದು ವರ್ಗದಲ್ಲಿ ಎಂಟು  ವಿದ್ಯಾರ್ಥಿಗಳು ಇರುತ್ತಾರೆ. ಮೂರು ಜನ ಪ್ರಾಧ್ಯಾಪಕರು; ಅಂಗವಿಕಲ ಮಕ್ಕಳ ಸಮನ್ಚಯ ಶಿಕ್ಷಣ. (ಐ.ಉ.ಈ) ತರಬೇತಿ ಪಡೆದ ಪ್ರಾಧ್ಯಾಪಕರಿದ್ದಾರೆ. ಒಟ್ಟು 48  ವಿದ್ಯಾರ್ಥಿಗಳು ಈ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿದ್ದಾರೆ. ಮುಖ್ಯೋಪಾಧ್ಯಾಯರಾಗಿ ಶ್ರೀ ಕೆ.ಎಕೆ. ಮಠಪತಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಪ್ರಾಥಮಿಕ ಶಾಲೆಯ ಹಂತದ ಎಲ್ಲ ವರ್ಗಗಳನ್ನು ಹೊಂದಿದ ಶಾಲೆಯಲ್ಲಿ ಸಾಕಷ್ಟು ಅಂಧ ವಿದ್ಯಾರ್ಥಿಗಳು ವಿದ್ಯಾರ್ಜನೆಗೈಯುತ್ತಿದ್ದಾರೆ. ಉತ್ತಮ ಭೋಧಕ ಸಿಬ್ಬಂದಿ, ಮತ್ತು ಭೋಧಕೇತರ ಸಿಬ್ಬಂದಿಯನ್ನೂ ಹೊಂದಿದ  ಈ ಸಂಸ್ಥೆಯು ಉತ್ತಮ ವಿದ್ಯಾರ್ಥಿಗಳ ನಿರ್ಮಾಣದಲ್ಲಿ ಹೆಚ್ಚು ಕ್ರಿಯಾ ಶೀಲತೆಯನ್ನು ಮೈಗೂಡಿಸಿಕೊಂಡು  ಉನ್ನತಿಯತ್ತ ಸಾಗುತ್ತಲಿದೆ.

 

ಶ್ರೀ ಕುಮಾರೇಶ್ವರ ಕೃಪಾಪೋಷಿತ ಪಂ. ಪಂಚಾಕ್ಷರ ಗವಾಯಿಗಳವರ ಸಂಗೀತ ಪಾಠಶಾಲೆ-1990 :

ಸಂಗೀತ ಕಲೆ, ಮಕ್ಕಳಲ್ಲಿ ಬಾಲ್ಯದಿಂದಲೇ ವಿಕಾಸವನ್ನು ಹೊಂದುವದರೊಂದಿಗೆ ಮಗುವಿನ ವ್ಯಕ್ತಿತ್ವವು ಪರಿಪೂರ್ಣವಾಗಬೇಕು ಎನ್ನುವ ಉದ್ದೇಶದಿಂದ ಡಾ. ಪಪುಟ್ಟರಾಜ ಗವಾಯಿಗಳವರು ತಮ್ಮ ಆರಾಧ್ಯದೈವವಾದ ಪೂಜ್ಯ ಶ್ರೀ ಹಾನಗಲ್ಲ ಕುಮಾರ ಮಹಾಸ್ವಾಮಿಗಳ ಹೆಸರಿನಡಿಯಲ್ಲಿ ಶ್ರೀ  ಕುಮಾರೇಶ್ವರ ಕೃಪಾಪೋಷಿತ ಪಂಡಿತ ಪಂಚಾಕ್ಷರ ಗವಾಯಿಗಳವರ ಸಂಗೀತ ಪಾಠ ಶಾಲೆಯನ್ನು ಕ್ರಿ.ಶ. 1990ರಲ್ಲಿ ಸ್ಥಾಪನೆ ಮಾಡಿದರು. ಸಂಗೀತ ಕ್ಷೇತ್ರದ ಗಾಯನ, ವಾದನ, ಕೀರ್ತನ ಕಲೆಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಸಾಕಷ್ಟು ರೀತಿಯಲ್ಲಿ ಅಳವಾದ ಪರಿಣಿತಿಯನ್ನು ಪಡೆಯಬೇಕು. ತಮ್ಮ ಪ್ರತಿಭೆಯ ಮೂಲಕ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಪಾರವಾದ ಸಾಧನೆಯನ್ನು ಕೈಗೊಳ್ಳುವಂತೆ ಪ್ರತಿಯೊಬ್ಬರನ್ನೂ ನಿರ್ಮಿಸಿಕೊಡುವ ಮಹಾಕಾರ್ಯವನ್ನು ಸಂಗೀತ ಪಾಠಶಾಲೆಯು. ಮಾಡುತ್ತಲಿದೆ.

 

News & Events