ಶ್ರೀ ವೀರೇಶ್ವರ ಪುಣ್ಯಾಶ್ರಮ ಗದಗ - ದಾವಣಗೆರೆ - ಶಿವಮೊಗ್ಗ

ಸ್ಥಾಪನೆ : 16.06.1915

ಪಂಚಾಕ್ಷರ ಗ್ರಂಥ ಮಾಲೆ

ಪಂಚಾಕ್ಷರ ಗ್ರಂಥಮಾಲೆ

          ಡಾ.ಪುಟ್ಟರಾಜ ಗವಾಯಿಗಳವರು ತಾವು ರಚಿಸುವ ಸಾಹಿತ್ಯ ಕೃತಿಗಳನ್ನು ಹಾಗೂ ತಮ್ಮ ಶಿಷ್ಯರ ಕೃತಿಗಳನ್ನು ಸ್ವತಂತ್ರವಾಗಿ ಪ್ರಕಟಿಸಿ, ಅವುಗಳನ್ನು ಜನತೆಗೆ ಮುಟ್ಟಿಸಲು ಸಹಾಯಕವಾಗುವ ಬಗೆಯನ್ನು ಆಲೋಚಿಸುತ್ತಿದ್ದರು. ತಮ್ಮದೇ ಆದ ಗ್ರಂಥ ಪ್ರಕಾಶನದೊಂದಿಗೆ, ಗ್ರಂಥ ಮಾಲೆಯನ್ನು ಪ್ರಾರಂಭಿಸುವ ಯೋಜನೆಯನ್ನು ರೂಪಿಸಿಕೊಂಡರು. ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಪರಿಶ್ರಮ ವಹಿಸಿದರು. ಪಂಚಾಕ್ಷರ ಗವಾಯಿಗಳವರ ಶಿಷ್ಯರಾದ ಚಿತ್ತರಗಿ ಗಂಗಾಧರ ಶಾಸ್ತ್ರಿಗಳು ಮುದ್ರಣ ಯಂತ್ರವನ್ನು ವೀರೇಶ್ವರ ಪುಣ್ಯಾಶ್ರಮಕ್ಕೆ ಕೊಡುಗೆಯಾಗಿ ಸಲ್ಲಿಸಿದರು. ಇದರಿಂದ ಆಶ್ರಮಕ್ಕೆ ಬಹುರೂಪವಾದ ಸಹಾಯ ಒದಗಿತು.

          ಪುಟ್ಟರಾಜ ಗವಾಯಿಗಳವರು ತಮ್ಮ ಕೃತಿಗಳನ್ನು ಪ್ರಕಟಿಸುವುದಕ್ಕಾಗಿ ಗುರುಗಳಾದ ಪಂಚಾಕ್ಷರ ಗವಾಯಿಗಳವರ ಹೆಸರಿನಲ್ಲಿಯೇ ಕ್ರಿ.ಶ.1956 ರಲ್ಲಿ ‘ಪಂಚಾಕ್ಷರ ಗ್ರಂಥಮಾಲೆ’ ಯನ್ನು ಸ್ಥಾಪಿಸಿ, ಅದರ ಮೂಲಕ ಲೇಖನಗಳನ್ನು, ಕೃತಿಗಳನ್ನು, ಕವನಗಳನ್ನು ಪ್ರಕಟಿಸ ತೊಡಗಿದರು. ಇದರ ಫಲವಾಗಿ ಪುಟ್ಟರಾಜ ಗವಾಯಿಗಳವರ ಹಲವಾರು ಕೃತಿಗಳು ಪ್ರಕಟಗೊಂಡು ಜನತೆಗೆ ತಲುಪುವಂತಾಯಿತು. ‘ಉಡುತಡಿಯ ಅಕ್ಕಮಹಾದೇವಿ’, ‘ಪಂಚಾಕ್ಷರ ಪುರಾಣ’ ಕೃತಿಗಳು ಪ್ರಕಟಗೊಂಡವು. ಪಂಚಾಕ್ಷರ ಗ್ರಂಥಾಲಯದ ನಿರ್ವಹಣೆಯನ್ನು ಲೋಕಿಕೆರೆ ನಾಗಯ್ಯಜ್ಜ ನವರು ನಡೆಸಿಕೊಂಡು ಬಂದಿದ್ದಾರೆ.

News & Events