ಗದಗ ತಲುಪುವುದು ಹೇಗೆ
ಗದಗ ನಗರವು ಜಿಲ್ಲಾ ಕೇಂದ್ರವಾಗಿದ್ದು ಉತ್ತಮ ಸಾರಿಗೆ ಸಂಪರ್ಕ ಹೊಂದಿದೆ. ಈ ನಗರವು ರಾಜ್ಯದ ರಾಜಧಾನಿಯಾದ ಬೆಂಗಳೂರಿನಿಂದ ನೇರ ರೈಲು ಹಾಗು ಬಸ್ ಸಂಪರ್ಕವನ್ನು ಹೊಂದಿದೆ. ಬೆಂಗಳೂರಿನಿಂದ ಈ ನಗರವು ಸುಮಾರು 400 ಕಿ.ಮೀ. ದೂರದಲ್ಲಿದೆ. ಗದಗ ನಗರದಿಂದ ಕೇವಲ 70 ಕಿ.ಮೀ. ದೂರವಿರುವ ಹುಬ್ಬಳ್ಳಿ ನಗರಕ್ಕೆ ವಿಮಾನ ಸೌಲಭ್ಯವೂ ಇರುತ್ತದೆ ಅಲ್ಲದೆ ಹುಬ್ಬಳ್ಳಿ ನಗರವು ಎಲ್ಲಾ ಕಡೆಗಳಿಂದಲೂ ಉತ್ತಮ ಬಸ್ ಹಾಗು ರೈಲ್ವೆ ಸಂಪರ್ಕ ಹೊಂದಿದೆ.