ಶ್ರೀ ವೀರೇಶ್ವರ ಪುಣ್ಯಾಶ್ರಮ ಗದಗ - ದಾವಣಗೆರೆ - ಶಿವಮೊಗ್ಗ

ಸ್ಥಾಪನೆ : 16.06.1915

ಧ್ಯೇಯೋದ್ದೇಶಗಳು

  1. ಪುಣ್ಯಾಶ್ರಮದಲ್ಲಿ ಜಾತಿ-ಮತ-ಭೇದಗಳನ್ನು ಮರೆತು ವಿದ್ಯಾಸಕ್ತರಾಗಿ ಸಂಗೀತ ಕಲಿಕೆಯ ಅಭೀಕ್ಷೆಹೊಂದಿದ ಆರು ವರ್ಷದ ವಿದ್ಯಾರ್ಥಿಗಳನ್ನು ಒಳಗೊಂಡಂತೆ ಪ್ರವೇಶ ನೀಡುವುದು.
  2. ಸಂಸ್ಕ್ರತಿ-ಸಾಹಿತ್ಯ ಅಧ್ಯಯನದೊಂದಿಗೆ ಸಂಗೀತ ಜ್ಞಾನವನ್ನು ಚೆನ್ನಾಗಿ ಮಾಡಿಕೊಡುವುದು.
  3. ಬ್ರೈಲ್ ಲಿಪಿಯ ಮೂಲಕ ಅಂಧ ಮಕ್ಕಳಿಗೆ ಅಕ್ಷರ ಕಲಿಕೆಯೊಂದಿಗೆ ಬರವಣಿಗೆ ಮತ್ತು ಓದುವುದನ್ನು ಮನನ ಮಾಡಿಕೊಡುವುದು.
  4. ವೀರಶೈವ ಧರ್ಮಗಳ ತತ್ವಾಚರಣೆಗಳ ಬಗ್ಗೆ ಅರಿವು ಮೂಡಿಸುವುದು, ಹಾಡುಗಾರಿಕೆ, ಕೀರ್ತನ, ಪ್ರವಚನಗಳ ಮೂಲಕ ಧರ್ಮದ ವಿಷಯಗಳನ್ನು ತಿಳಿಸಿಕೊಡುವುದು.
  5. ಕರ್ನಾಟಕ-ಹಿಂದೂಸ್ಥಾನಿ, ಸಂಗೀತಗಳೆರಡನ್ನು ಬೋಧಿಸುವುದು.
  6. ಅಂಧ-ಅನಾಥ ಮಕ್ಕಳಿಗೆ ಸರ್ವಧರ್ಮಿಯ ಅಸಹಾಯಕ ಮಕ್ಕಳಿಗೆ ಆಶ್ರಯವನ್ನು ನೀಡಿ ಯಾವುದಾದರೂ ಕಲೆಯೊಂದನ್ನು ರೂಪಿಸಿಕೊಳ್ಳುವಂತೆ ಶಿಕ್ಷಣ ನೀಡುವುದು.
  7. ದುರ್ವ್ಯಸನಗಳಿಂದ ಮುಕ್ತರಾಗಿ, ಶುಚಿತ್ವದೊಂದಿಗೆ ಅಧ್ಯಯನದಲ್ಲಿ ತೊಡಗುವಂತೆ ಪ್ರೇರಣೆ, ಪ್ರೋತ್ಸಾಹವನ್ನು ನೀಡುವುದು.
  8. ಯೋಗ ಅಧ್ಯಯನ, ವೈದಿಕ ಶಾಸ್ತ್ರಗಳ ಪರಿಚಯವನ್ನು ಮಾಡಿಕೊಸುವುದು.
  9. ವೀರಶೈವ ಧರ್ಮಾಚರಣೆ, ತತ್ವಪಾಲನೆ, ವಿಧಿ ವಿಧಾನಗಳ ಬಗ್ಗೆ ಅರಿವು ಮೂಡಿಸುವುದು.
  10. ಕೀರ್ತನೆ, ಪ್ರವಚನ, ಭಜನೆ, ಪುರಾಣ, ನಾಟಕ ವ್ಯಾಕ್ಯಾನ ಭಾಷಣ, ಅಭಿನಯ, ಕಾವ್ಯರಚನೆ ಮೊದಲಾದ ಲಲಿತಕಲೆಗಳಲ್ಲಿ ಪರಿಣತಿಯನ್ನು ಸಾಧಿಸುವಂತೆ ವಿದ್ಯಾರ್ಥಿಗಳನ್ನು ಗುರುತಿಸಿ ಮಾರ್ಗದರ್ಶನ ನೀಡುವುದು.

ವಿದ್ಯಾರ್ಥಿಗಳ ಪ್ರವೇಶ: ಪ್ರತಿಯೊಬ್ಬ ವಿದ್ಯಾರ್ಥಿಯ ಪ್ರವೇಶಕ್ಕಾಗಿ 51/- ರೂಪಾಯಿಗಳನ್ನು ಸ್ವೀಕರಿಸಿ ಆರು ವರ್ಷಗಳ ಕಾಲ ಅನ್ನ ಅರಿವೆ ಆಶ್ರಯವನ್ನು ನೀಡಲಾಗುವುದು. ಎಲ್ಲ ವರ್ಗದ, ಅಂಧ-ಅನಾಥ ಮಕ್ಕಳು ಪ್ರವೇಶ ಪಡೆಯುವ ಅವಕಾಶವಿದೆ.

ಪಠ್ಯವಸ್ತುಗಳು: ಬ್ರೈಲ್ ಲಿಪಿ, ಸಂಗೀತ, ವಿದ್ವತ್, ವಿಶಾರದ, ಪ್ರವೀಣ ಪರೀಕ್ಷೆಗಾಗಿ ಕರ್ನಾಟಕ-ಹಿಂದೂಸ್ಥಾನಿ ಇರುವ ವಿಷಯಗಳನ್ನು ಸಂಗೀತ ಪಠ್ಯಕ್ರಮಕ್ಕೆ ಒಳಪಡಿಸಲಾಗಿದೆ.

ದಿನಚರಿ: ವಿದ್ಯಾರ್ಥಿಗಳಿಗೆ ಪ್ರತಿದಿನ ಪ್ರಾತಃಕಾಲದಲ್ಲಿ ಸಂಗೀತ ಬಗ್ಗೆ ಅಭ್ಯಾಸದ ಪಾಠಗಳನ್ನು ತಿಳಿಸಿಕೊಡುವುದು, ನಂತರ ಬೆಳಗಿನ ಸಂದರ್ಭದಲ್ಲಿ ಪ್ರಾರ್ಥನೆಯನ್ನು ಮಾಡಿಸುವುದು ನಂತರ ವಿದ್ಯಾರ್ಥಿಗಳಿಗೆ ಅಲ್ಪೋಹಾರ ಹಾಗೂ ವಿಶ್ರಾಂತಿಯನ್ನು ನೀಡುವುದು. ಮಧ್ಯಾಹ್ನದಲ್ಲಿ ವಿದ್ಯಾರ್ಥಿಗಳಿಗೆ ಊಟವನ್ನು ಪೂರೈಸುವುದು ಮತ್ತೆ ಸಾಯಂಕಾಲದಲ್ಲಿ ವಿದ್ಯಾರ್ಥಿಗಳಿಗೆ ಪ್ರಯೋಗಿಕವಾಗಿ ಸಂಗೀತ ಅಭ್ಯಾಸವನ್ನು ಕಲಿಸುವುದು.

ಅಧ್ಯಾಪಕ ವರ್ಗ: ಸಂಗೀತ ಕ್ಷೇತ್ರದ ವಿವಿಧ ವಾದ್ಯಗಳನ್ನು ನುಡಿಸುವಲ್ಲಿ ಪ್ರತಿಭಾವಂತ ಅರ್ಹರಾದ ಶಿಕ್ಷಕರನ್ನು ನೇಮಿಸಿ ಅವರಿಂದ ಮಕ್ಕಳಿಗೆ ಪಾಠಗಳನ್ನು ಪಠ್ಯಕ್ರಮಕ್ಕನುಗುಣವಾಗಿ ತಿಳಿಸಿಕೊಡುವುದು.

News & Events